Shobha Karndlaje

Untitled-2

BJP Karnataka

ಯಡಿಯೂರಪ್ಪನವರೇ ಬಿಜೆಪಿಯ ನಿಜವಾದ ಶಕ್ತಿ : ಶೋಭಾ

ಹುಬ್ಬಳ್ಳಿ, ಮಾ. 10 : ಯಡಿಯೂರಪ್ಪನವರ ಹುಟ್ಟುಹಬ್ಬದ ಪ್ರಯುಕ್ತ ಹುಬ್ಬಳ್ಳಿಯಲ್ಲಿ ಭಾನುವಾರ ಆಯೋಜಿಸಲಾಗಿರುವ ಸಮಾರಂಭ ಯಡಿಯೂರಪ್ಪನವರ ಶಕ್ತಿ ಪ್ರದರ್ಶನದ ವೇದಿಕೆಯಲ್ಲ. ಅವರ ಸಾಧನೆಯನ್ನು ನಾಡಿಗೆ ತಿಳಿಸುವ, ಅವರನ್ನು ಅಭಿನಂದಿಸುವ ಕಾರ್ಯಕ್ರಮ ಮಾತ್ರವಾಗಿದೆ ಎಂದು ಇಂಧನ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಯಡಿಯೂರಪ್ಪನವರಿಗೆ ಪಕ್ಷದಲ್ಲಿ ಉನ್ನತ ಸ್ಥಾನಮಾನ ನೀಡಬೇಕೆಂಬ ಕೂಗು ಎದ್ದಿರುವ ಸಂದರ್ಭದಲ್ಲಿ, ಹುಬ್ಬಳ್ಳಿಯ ಸಮಾರಂಭವನ್ನು ತಮ್ಮ ಬೆಂಬಲಿಗರನ್ನೆಲ್ಲ ಒಗ್ಗೂಡಿಸಿ ಶಕ್ತಿ ಪ್ರದರ್ಶಿಸಿ ಯಡಿಯೂರಪ್ಪ ಬಿಜೆಪಿ ಹೈಕಮಾಂಡಿಗೆ ಸೆಡ್ಡು ಹೊಡೆಯಲಿದ್ದಾರೆ ಎಂಬ ಮಾತು ಬಂದಿರುವ ಹಿನ್ನೆಲೆಯಲ್ಲಿ ಶೋಭಾ ಮೇಲಿನಂತೆ ನುಡಿದರು.
ಯಡಿಯೂರಪ್ಪನವರೇ ಬಿಜೆಪಿಯ ಶಕ್ತಿ. ರಾಜ್ಯದಲ್ಲಿ ಅವರೇ ಅಗ್ರಪಂಕ್ತಿಯ ನಾಯಕ. ಪಕ್ಷವನ್ನು ಕಟ್ಟಿ ಬೆಳೆಸಿ ಕರ್ನಾಟಕದಲ್ಲಿ ಅಧಿಕಾರಕ್ಕೆ ತರಲು ಸಾಕಷ್ಟು ಶ್ರಮಿಸಿದ್ದಾರೆ. ಅವರು ಶಕ್ತಿ ಪ್ರದರ್ಶನ ಮಾಡಿ ಯಾವುದೇ ಪಟ್ಟ ಅಥವಾ ಸ್ಥಾನ ಪಡೆಯಲು ಯತ್ನಿಸಬೇಕಿಲ್ಲ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.
ಆದರೆ, ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಯಡಿಯೂರಪ್ಪನವರ ವಿರುದ್ಧ ಲೋಕಾಯುಕ್ತ ಪೊಲೀಸರು ಹೂಡಿದ್ದ ಎಫ್ಐಆರ್ ರದ್ದಾದ ನಂತರ ಪಕ್ಷದ ಕಾರ್ಯಕರ್ತರಲ್ಲಿ ಮತ್ತು ಅವರ ಬೆಂಬಲಿಗರಲ್ಲಿ ಭಾರೀ ಹುಮ್ಮಸ್ಸು ಬಂದಿದೆ ಎಂದು ಶೋಭಾ ಅವರು ಸಂತಸ ವ್ಯಕ್ತಪಡಿಸಿದರು.

http://kannada.oneindia.in/news/2012/03/10/districts-yeddyurappa-need-not-show-strength-shobha-aid0038.html

Quotes

Do we not all agree to callrapid thought and noble impulse by the name of inspiration?

— George Eliot

Newsletter

Get latest updates of my blog, news, media watch in your email inbox. subscribe to my newsletter