Shobha Karndlaje

Untitled-2

BJP Karnataka

‘ಅರ್ಥ್ ಅವರ್’ ಆಚರಿಸಿ, ಶಕ್ತಿ ಉಳಿಸಿ: ಸಚಿವೆ ಶೋಭಾ

ಬೆಂಗಳೂರು, ಮಾ.30: ಅರ್ಥ್ ಅವರ್ ಎಂಬ ಅರ್ಥಪೂರ್ಣ ಚಳವಳಿ ಮತ್ತೆ ಬಂದಿದೆ. ಜಾಗತಿಕ ತಾಪಮಾನ ಹಾಗೂ ವಿಪರೀತವಾಗಿ ಬದಲಾಗುತ್ತಿರುವ ಹವಾಮಾನದಿಂದಾಗಿ ಉಂಟಾಗುತ್ತಿರುವ ಅನಾಹುತಗಳನ್ನು ತಡೆಗಟ್ಟಲು ವರ್ಲ್ಡ್ ವೈಲ್ಡ್ ಲೈಫ್ ಫಂಡ್ ಈ ಅಭಿಯಾನಕ್ಕೆ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಕೂಡಾ ಕೈ ಜೋಡಿಸಿದ್ದಾರೆ.
ಭಾರತದಲ್ಲಿ ಈ ಬಾರಿ ಮಾ.31ರಂದು ಶನಿವಾರ ರಾತ್ರಿ 8.30 ನಿಮಿಷಕ್ಕೆ ಅರ್ಥ್ ಅವರ್ ಆರಂಭವಾಗಲಿದ್ದು 9.30 ಗಂಟೆವರೆಗೆ ಆಚರಣೆ ಇರುತ್ತದೆ. ಪರಿಸರ ಸಂರಕ್ಷಣೆಗಾಗಿ ವಿದ್ಯುತ್ ದೀಪಗಳನ್ನು ಸ್ವಿಚ್ ಆಫ್ ಮಾಡಿ ಎಂದು ಸಚಿವೆ ಶೋಭಾ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ವಿಶ್ವದಾದ್ಯಂತ ನಡೆಯುವ ಈ ಸಾಂಕೇತಿಕ ಪ್ರತಿಭಟನೆಯಲ್ಲಿ ಸುಮಾರು 150ಕ್ಕೂ ಹೆಚ್ಚು ದೇಶಗಳು ಪಾಲ್ಗೊಳ್ಳುತ್ತಿವೆ. ಸಿಡ್ನಿಯಲ್ಲಿ 2007ರಲ್ಲಿ ಆರಂಭವಾದ ಈ ಚಳವಳಿಗೆ ಭಾರತದಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಅರ್ಥ್ ಅವರ್ ಕೇವಲ ಒಂದು ಗಂಟೆ ವಿದ್ಯುತ್ ದೀಪ ಆರಿಸುವ ಕ್ರಿಯೆಯಾಗದೆ, ಜಾಗತಿಕ ತಾಪಮಾನ ಹೆಚ್ಚಳವನ್ನು ತಗ್ಗಿಸಲು ಪ್ರತಿ ದಿನ ಪ್ರಯತ್ನ ಪಡೆಬೇಕಾಗಿದೆ ಎಂದು ಡಬ್ಲ್ಯೂಡಬ್ಲ್ಯೂಎಫ್ ನ ಸಿಇಒ ರವಿ ಸಿಂಗ್ ಹೇಳುತ್ತಾರೆ.
ನಟ ಅಮೀರ್ ಖಾನ್, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಮೋಹನದಾಸ್ ಪೈ ಮುಂತಾದವರು ಈ ಚಳವಳಿಗೆ ಪ್ರತಿವರ್ಷದಂತೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಎಸ್ಟೀಮ್ ಮಾಲ್, ಬ್ರಿಗೇಡ್ ರಸ್ತೆಯ ಮಳಿಗೆಗಳು, ಕೆಲವು ಅಪಾರ್ಟ್ಮೆಂಟ್ ಗಳಲ್ಲಿ ಅರ್ಥ್ ಅವರ್ ಅನ್ನು ಆಚರಿಸಿಕೊಂಡು ಬರಲಾಗಿದೆ.

http://kannada.oneindia.in/news/2012/03/30/international-earth-hour-2012-minister-shobha-climate-change-wwf-aid0039.html

Quotes

The more difficulties one has to encounter, within and without, the more significant and the higher in inspiration his life will be.

— Horace Bushnell

Newsletter

Get latest updates of my blog, news, media watch in your email inbox. subscribe to my newsletter