Shobha Karndlaje

Untitled-2

BJP Karnataka

ಯಡಿಯೂರಪ್ಪ ಕಣ್ಣೀರು ಹಾಕಿಸಿದವರಿಗೆ ಪಾಠ ಕಲಿಸಿ: ಶೋಭಾ ಕರಂದ್ಲಾಜೆ

ಬಳ್ಳಾರಿ, ನ.20: ಬಳ್ಳಾರಿ ಗ್ರಾಮಾಂತರ ವಿಧಾನಸಭಾ (ಮೀಸಲು) ಕ್ಷೇತ್ರದ ಉಪ ಚುನಾವಣೆ ಪ್ರಚಾರ ಮಾಗಿಯ ಚಳಿಯಲ್ಲಿ ಬಿಸಿಯೇರುತ್ತಿದೆ. ಇಂಧನ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಸಹ ಪ್ರಚಾರಕ್ಕೆ ಕಾವು ಕೊಡತೊಡಗಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕಣ್ಣೀರು ಹಾಕಿಸುವಂತೆ ಮಾಡಿದವರಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿರಿ ಎಂದು ಶೋಭಾ ಕರೆ ನೀಡಿದ್ದಾರೆ.
ಯಡಿಯೂರಪ್ಪ ಅವರ ಜನಪರ ಯೋಜನೆಗಳನ್ನು ಸಹಿಸದೆ ಕೊಡಲಾರದ ಕಷ್ಟ ಕೊಟ್ಟು ಆನಂದ ಅನುಭವಿಸಿದವರಿಂದಾಗಿ ಈ ಚುನಾವಣೆ ಬಂದಿದೆ.
ಒಂದೂವರೆ ವರ್ಷದ ಈ ಚುನಾವಣೆ ಖಂಡಿತಾ ಬೇಕಾಗಿರಲಿಲ್ಲ. ಜನರು ಅವರ ವಿರುದ್ಧ ಮತ ಚಲಾಯಿಸಿ ಬಿಜೆಪಿಗೆ ಅದರಲ್ಲೂ ಯಡಿಯೂರಪ್ಪ ಅವರಿಗೆ ಶಕ್ತಿ ತುಂಬಬೇಕು ಎಂದು ಶೋಭಾ ಕೋರಿದರು.
ಹಲಕುಂದಿ, ಮಿಂಚೇರಿ, ಸಂಜೀವರಾಯನ ಕೋಟೆ ಹಾಗೂ ಎತ್ತಿನ ಬೂದಿಹಾಳ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಪರ ಬಿರುಸಿನ ಪ್ರಚಾರ ನಡೆಸಿದ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ, ಕಾನೂನು ಸಚಿವ ಸುರೇಶಕುಮಾರ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ರಾಮದಾಸ್‌ ಹಾಗೂ ವಿವಿಧ ವಾರ್ಡುಗಳಿಲ್ಲಿ ಸಂಚರಿಸಿ ಬಿಜೆಪಿ ಅಭ್ಯರ್ಥಿ ಗಾದಿಲಿಂಗಪ್ಪಪರ ಪ್ರಚಾರ ಮಾಡಿದರು.
ಶಕ್ತಿ ಪ್ರದರ್ಶನ: ಕಳೆದ ಮೂರು ದಿನಗಳಿಂದ ಬಳ್ಳಾರಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿರುವ ಬಿಜೆಪಿ ಶನಿವಾರ ಕ್ಷೇತ್ರದಲ್ಲಡೇ ತನ್ನ ಶಕ್ತಿ ಪ್ರದರ್ಶನ ನಡೆಸಿತು. ಸಚಿವ ಸಂಪುಟದ ಹಲವು ಸಚಿವರು, ಶಾಸಕರು, ರಾಜ್ಯ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಭಾರತಿ ಶೆಟ್ಟಿ, ಕೇಂದ್ರ ಪುರ್ನವಸತಿ ಅಧ್ಯಕ್ಷ ಕೆ ರಾಮಲಿಂಗಪ್ಪ ಸೇರಿದಂತೆ ಅನೇಕರು ಬಿರುಸಿನ ಪ್ರಚಾರ ನಡೆಸುವ ಮೂಲಕ ಎಲ್ಲರ ಗಮನ ಸೆಳೆದರು.

http://kannada.oneindia.in/news/2011/11/20/teach-lesson-to-bsy-detractors-shobha-karandlaje-aid0135.html

Quotes

Men do less than the yought,unless they do all they can

— Thomas Carlyle

Newsletter

Get latest updates of my blog, news, media watch in your email inbox. subscribe to my newsletter