Shobha Karndlaje

Untitled-2

BJP Karnataka

ಈ ವೆಬ್ ಸೈಟ್ ಬಗ್ಗೆ ಒಂದಿಷ್ಟು…

ಅಂತರ್ಜಾಲದ ಮೂಲಕ ನಾನು ನಿಮ್ಮೆಲ್ಲರನ್ನು ಸಂಪರ್ಕದಲ್ಲಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ವಿವಿಧ ಇಲಾಖೆಗಳ, ಸಂಘ ಸಂಸ್ಥೆಗಳ ಬಗ್ಗೆ ಮಾಹಿತಿ, ಸರಕಾರ, ಆಡಳಿತ, ಅಭಿವೃದ್ಧಿ ವಿಷಯಗಳ ಬಗ್ಗೆ ಮಾಹಿತಿ ಮತ್ತು ಚರ್ಚೆಗೆ ಅವಕಾಶವಾಗುವಂತೆ ಇದನ್ನು ರೂಪಿಸಲಾಗಿದೆ. ಬೆಂಗಳೂರಿನ ವಿವಿಧ ಶಾಲೆಗಳ, ಆಸ್ಪತ್ರೆಗಳ, ಕಲ್ಯಾಣ ಮಂಟಪಗಳ ಮಾಹಿತಿಗಳನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಕೊಡುವಂತಹ ಪ್ರಯತ್ನವನ್ನು ಮಾಡುತ್ತಿದ್ದೇನೆ. ನಮ್ಮ ರಾಜ್ಯದ ವಿವಿಧ ದೇವಸ್ಥಾನಗಳು, ಪ್ರಮುಖ ಪ್ರವಾಸಿ ತಾಣಗಳ ಬಗ್ಗೆಯೂ ವಿವರ ಒದಗಿಸುವ ಪ್ರಯತ್ನ ನಡೆದಿದೆ.

ರಾಜ್ಯದಲ್ಲಿ ವಿಶೇಷ ಸಾಧನೆ ಮಾಡಿದ ಮಹಿಳೆಯರು, ಯುವಕ-ಯುವತಿಯರ ಪರಿಚಯ ಮತ್ತು ಅವರ ಸಾಧನೆಯ ಮೈಲಿಗಲ್ಲನ್ನ ಜನತೆಗೆ ಈ ಮೂಲಕ ತಿಳಿಸುವ ಮತ್ತು ನೀವೂ ನಮಗೆ ಈ ಬಗ್ಗೆ ಮಾಹಿತಿ ಒದಗಿಸುವ ಪರಸ್ಪರ ಪೂರಕವಾಗಿ ಕೆಲಸ ಮಾಡುವ ಉದ್ದೇಶವಿದೆ.

ವಾರಕ್ಕೆ ಒಂದು ದಿನ ಈ ಎಲ್ಲಾ ಮಾಹಿತಿಗಳ ಬಗ್ಗೆ, ಸಮಸ್ಯೆಗಳ ಬಗ್ಗೆ, ಯಶೋಗಾಥೆಗಳ ಬಗ್ಗೆ ನನ್ನ ಜೊತೆ ನೇರ ಚಾಟ್ ಮಾಡುವ ವ್ಯವಸ್ಥೆ ಮಾಡಲಾಗಿದೆ. ಹಾಗೆಯೆ ಟ್ವಿಟ್ಟರ್, ಪೇಸ್‌ಬುಕ್‌ಗಳ ಮೂಲಕನೂ ನನ್ನೊಂದಿಗೆ ನೀವು ಸಂಪರ್ಕ ಬೆಳೆಸಬಹುದು. ಒಟ್ಟಾರೆಯಾಗಿ ಜನತೆಗೆ ಉಪಯೋಗವಾಗುವ ರೀತಿಯಲ್ಲಿ ಈ ವೆಬ್‌ಸೈಟ್ ಇರಬೇಕೆಂಬುದು ನನ್ನ ಒಂದು ಸಣ್ಣ ಪ್ರಯತ್ನ. ನಿಮ್ಮ ಸಲಹೆಗಳಿಗೆ ಸದಾ ಸ್ವಾಗತವಿದೆ.

ಇಂತಿ
ಶೋಭಾ

Quotes

Never think there is anythingimpossible for the soul. It is the greatest heresy to think so. If there issin, this is the only sin ? to say that you are weak, or others are weak.

— Swami Vivekananda

Newsletter

Get latest updates of my blog, news, media watch in your email inbox. subscribe to my newsletter