Shobha Karndlaje

Untitled-2

BJP Karnataka

ಹೊಸ ಮನೆಗಳಿಗೆ ಸೋಲಾರ್ ಕಡ್ಡಾಯ : ಶೋಭಾ

ಬೆಂಗಳೂರು, ಫೆ. 14: ಹೊಸ ಮನೆಗಳನ್ನು ನಿರ್ಮಿಸುವವರು ವಿದ್ಯುತ್ ಸಂಪರ್ಕ ಪಡೆಯುವ ಸಂದರ್ಭದಲ್ಲಿ ಕಡ್ಡಾಯವಾಗಿ ಸೋಲಾರ್ ಅಳವಡಿಸಬೇಕು. ಇಲ್ಲದಿದ್ದರೆ ವಿದ್ಯುತ್ ಸಂಪರ್ಕ ನೀಡದಿರಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಇಂಧನ ಹಾಗೂ ಆಹಾರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ದಿನೇ ದಿನೇ ವಿದ್ಯುತ್‌ಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಸೋಲಾರ್ ವಿದ್ಯುತ್ ಅಳವಡಿಕೆಗೆ ಸೂಚನೆ ನೀಡಲಾಗುವುದು. ಮನೆಗೆ ವಿದ್ಯುತ್ ಪಡೆಯುವಾಗ ಸೋಲಾರ್ ವಿದ್ಯುತ್ ಅಳವಡಿಸ ಲೇಬೇಕೆಂಬ ಸರಕಾರದ ನಿರ್ಧಾರದ ವಿರುದ್ಧ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದು, ಅವರ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಾಲಯ, ಸರಕಾರದ ನಿಲುವನ್ನು ಎತ್ತಿ ಹಿಡಿದಿದೆ.
ಮನೆ ನಿರ್ಮಿಸುವ ವೇಳೆ ವಿದ್ಯುತ್ ಸಂಪರ್ಕದ ಜೊತೆಗೆ ಸೋಲಾರ್ ವಿದ್ಯುತ್‌ನ್ನು ಅಳವಡಿಸಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ವಿದ್ಯುತ್ ಕಂಪೆನಿಗಳಿಗೆ ಸೂಚನೆ ನೀಡಲಾಗಿದೆ ಮುಂದಿನ 2 ವರ್ಷದಲ್ಲಿ ರಾಜ್ಯದ ಎಲ್ಲ ಕುಗ್ರಾಮಗಳಿಗೂ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗುವುದು ಎಂದು ಸಚಿವೆ ಶೋಭಾ ತಿಳಿಸಿದರು.

ಬೇಸಿಗೆಯಲ್ಲಿ ಕೊರತೆ ಉಂಟಾಡೋಲ್ಲ: ವಿದ್ಯುತ್‌ಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೇಸಿಗೆಯಲ್ಲಿ ವಿದ್ಯುತ್ ಕೊರತೆ ಉಂಟಾಗದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆಯನ್ನು ವಹಿಸಲಾಗಿದೆ ಎಂದು ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದರು. ಜಲವಿದ್ಯುತ್ ಹಾಗೂ ಶಾಖೋತ್ಪನ್ನ ವಿದ್ಯುತ್ ಘಟಕಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಯಾಗುವ ಸಾಧ್ಯತೆ ಇದೆ. ಇದರಿಂದ ಮಾರ್ಚ್, ಎಪ್ರಿಲ್‌ನಲ್ಲಿ ಬೇಡಿಕೆಗೆ ತಕ್ಕಂತೆ ವಿದ್ಯುತನ್ನು ಪೂರೈಸಬಹುದಾಗಿದೆ ಎಂದರು.
ಛತ್ತೀಸ್‌ಘಡ ವಿದ್ಯುತ್ ವಿನಿಮಯ ಕೇಂದ್ರದಿಂದ 1300 ಮೆಗಾ ವ್ಯಾಟ್ ವಿದ್ಯುತ್ ಖರೀದಿ ಮಾಡಲಾಗುತ್ತಿದೆ. ಜೊತೆಗೆ ಸೆಪ್ಟಂಬರ್‌ನಲ್ಲಿ ಬಳ್ಳಾರಿಯ ಎರಡನೆ ಶಾಖೋತ್ಪನ್ನ ವಿದ್ಯುತ್ ಘಟಕ(Bellary Thermal Power Station (BTPS)) ಕಾರ್ಯಾರಂಭ ಮಾಡಲಿದ್ದು, ಇದರಿಂದ 500 ಮೆಗಾ ವ್ಯಾಟ್ ವಿದ್ಯುತ್ ಲಭ್ಯವಾಗಲಿದೆ ಎಂದ ಶೋಭಾ, ಇದಲ್ಲದೆ ಉಡುಪಿ ಎರಡನೆ ಶಾಖೋತ್ಪನ್ನ ಘಟಕವು ಈ ವರ್ಷದ ಕೊನೆಯಲ್ಲಿ ತನ್ನ ಕಾರ್ಯಾರಂಭವನ್ನು ನಡೆಸಲಿದೆ ಎಂದರು.

http://thatskannada.oneindia.in/news/2011/02/15/energy-minister-shobha-bangalore-solar-power-aid0039.html

Quotes

Before you start some work, always ask yourself three questions –
Why am I doing it, What the results might be and Will I be successful. Only when you think deeply
And find satisfactory answers to these questions, go ahead.

— Chanakya

Newsletter

Get latest updates of my blog, news, media watch in your email inbox. subscribe to my newsletter