Shobha Karndlaje

Untitled-2

BJP Karnataka

ವೆಬ್ ಸೈಟ್ ಉಧ್ಘಾಟನೆ ಮತ್ತು ಜನರ ಪ್ರತಿಕ್ರಿಯೆ

ಗೌರವಾನ್ವಿತರಾದ ಶ್ರೀಮತಿ ಸುಧಾಮೂರ್ತಿಯವರ ಅಮೃತ ಹಸ್ತದಿಂದ ವೆಬ್‌ಸೈಟ್ ಆರಂಭ ಆಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವಾರು ಗಣ್ಯ ಮಹಿಳೆಯರು ಕಾರ್ಯಕ್ರಮಕ್ಕೆ ಬಂದು ಹರಸಿದರು. ಮೊದಲ ದಿನವೇ ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಎಷ್ಟಿದೆ ಅನ್ನುವುದು ಗಮನಕ್ಕೆ ಬಂತು.

2800 ಜನ ವೆಬ್‌ಸೈಟನ್ನು ಮೊದಲ ದಿನದಂದೇ ವೀಕ್ಷಣೆ ಮಾಡಿದ್ದೀರಿ, ಧನ್ಯವಾದಗಳು. ಸಾರ್ವಜನಿಕ ಮತ್ತು ವೈಯಕ್ತಿಕ ಸಮಸ್ಯೆಗಳ ಕುರಿತು ತುಂಬಾ ಜನ ಬರೆದಿದ್ದೀರಿ. ಸಾರ್ವಜನಿಕ ಕುಂದು ಕೊರತೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ನನ್ನ ಪ್ರಯತ್ನ ಮುಂದುವರಿಸುತ್ತೇನೆ. ಆದರೆ ತೀರಾ ವೈಯಕ್ತಿಕ ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡುವುದು ಸ್ವಲ್ಪ ಕಷ್ಟವಾದೀತು. ದಯಮಾಡಿ ಎಲ್ಲರೂ ಸಹಕರಿಸಬೇಕೆಂದು ವಿನಂತಿ. ಕಳೆದ ಬ್ಲಾಗ್‌ನಲ್ಲಿ ಎಂಡೋಸಲ್ಫಾನ್ ಸಮಸ್ಯೆ ಬಗ್ಗೆ ಬರೆದಿದ್ದೆ. ನಿಮ್ಮೆಲ್ಲರ ನೈತಿಕ ಬೆಂಬಲ ಹಾಗೂ ಮುಖ್ಯಮಂತ್ರಿಗಳ ಉದಾರ ಮನಸ್ಸಿನಿಂದಾಗಿ ಎಂಡೋಸಲ್ಫಾನ್ ಪೀಡಿತರಾದ 231 ಜನರಿಗೆ ಫೆಬ್ರವರಿ 28 ರಂದು ಒಬ್ಬರಿಗೆ 50 ಸಾವಿರ ಪರಿಹಾರ, ತಿಂಗಳ ಮಾಸಾಶನ ಮತ್ತು ಕೊಕ್ಕಡದಲ್ಲಿ ಪುನರ್ವಸತಿ ನಿರ್ಮಿಸಲು 25 ಲಕ್ಷ ರೂಪಾಯಿ ಬಿಡುಗಡೆ ಮಾಡಿ ಪರಿಹಾರ ವಿತರಿಸಲಾಯಿತು. ಪೂಜ್ಯ ಧರ್ಮಸ್ಥಳ ವಿರೇಂದ್ರ ಹೆಗ್ಗಡೆಯವರ ನೇತ್ರತ್ವದಲ್ಲಿ ಪುನರ್ವಸತಿ ಕೇಂದ್ರ ನಡೆಯಲಿದೆ. ಕಳೆದ 4-5 ತಿಂಗಳ ನನ್ನ ಪರಿಶ್ರಮಕ್ಕೆ, ಜನರಿಗೆ ಪರಿಹಾರ ಸಿಕ್ಕಿದ್ದು ಆನಂದ ತಂದಿದೆ.

ದಿನಕ್ಕೆ ಸಾವಿರಾರು ಪತ್ರಗಳು ಬರುತ್ತಿರುವುದರಿಂದ ಉತ್ತರಿಸುವುದು ಸ್ವಲ್ಪ ತಡವಾಗುತ್ತಿದೆ, ಕ್ಷಮಿಸಿ.

ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯ ತಯಾರಿ ನಡೀತಿದೆ. ನನ್ನ ಕ್ಷೇತ್ರದಲ್ಲಿ 5 ವಾರ್ಡ್‌ಗಳಿಗೆ ಚುನಾವಣೆ ಇದೆ. ಚುನಾವಣೆ ನಂತರ ಬೆಂಗಳೂರಿನ ಸಮಸ್ಯೆಯಾಗಿರುವ ಹಿಜಡಗಳ ಬಗ್ಗೆ ಗಮನ ಕೊಡಬೇಕೆಂದು ತೀರ್ಮಾನಿಸಿದ್ದೇನೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದೇನೆ.

ನಿಮ್ಮೆಲ್ಲರ ಸಲಹೆ-ಸೂಚನೆಗಳಿಗೆ ಧನ್ಯವಾದಗಳು.

ಸದಾ ನಿಮ್ಮ ಸಲಹೆಗಳ ನಿರೀಕ್ಷೆಯಲ್ಲಿ…

ಶೋಭಾ

Quotes

You have to grow from theinside out. None can teach you, none can make you spiritual. There is noother teacher but your own soul.

— Swami Vivekananda

Newsletter

Get latest updates of my blog, news, media watch in your email inbox. subscribe to my newsletter