Shobha Karndlaje

Untitled-2

BJP Karnataka

ಬೆಸ್ಕಾಂ ಸಹಾಯವಾಣಿ 24/7 : 18004252627

ಬೆಂಗಳೂರು, ಏ.19: ವಿದ್ಯುತ್ ಮತ್ತು ನೀರಿನ ಸಮಸ್ಯೆಗಳಿಗೆ ಸಂಬಂಧಿಸಿದಂತೆ 24 ತಾಸುಗಳ ಸಹಾಯವಾಣಿಗೆ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರು ನಗರದ ಬೆಸ್ಕಾಂ (BESCOM) ಕೇಂದ್ರ ಕಚೇರಿಯಲ್ಲಿ ಬುಧವಾರ ಚಾಲನೆ ನೀಡಿದರು. ರಾಜ್ಯದಲ್ಲಿ ಬರಗಾಲ ಎದುರಾಗಿರುವ ಕಾರಣ ವಿದ್ಯುತ್‌, ನೀರು ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು 24 ಗಂಟೆಗಳ ಈ ಸಹಾಯವಾಣಿಯನ್ನು ಆರಂಭಿಸಲಾಗಿದೆ.

ಬೆಂಗಳೂರಿನಲ್ಲಿ 25 ಮತ್ತು ಬಾಗೇಪಲ್ಲಿಯಲ್ಲಿ 25 ಟೋಲ್‌ ಫ್ರೀ ಲೈನ್‌ಗಳನ್ನು ಸದ್ಯಕ್ಕೆ ಆರಂಭಿಸಲಾಗಿದೆ. ಅಗತ್ಯಬಿದ್ದಲ್ಲಿ ಇನ್ನೂ 25 ಕೇಂದ್ರಗಳನ್ನು ಪ್ರಾರಂಭಿಸಲಾಗುವುದು. ಬರ ಇರುವ ಕಾರಣ ಮೂರು ತಿಂಗಳ ಮಾತ್ರ ಇವು ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದ ಅವರು, ಗ್ರಾಹಕರು 18004252627ಗೆ ಉಚಿತ ಕರೆಮಾಡಬಹುದು ಎಂದು ಶೋಭಾ ತಿಳಿಸಿದರು.

ವಿದ್ಯುತ್‌, ನೀರು, ಪಂಪ್‌ಸೆಟ್‌ ಸೇರಿದಂತೆ ಯಾವುದೇ ವಿಷಯದ ಬಗ್ಗೆ ಜನರಿಂದ ಸಮಸ್ಯೆಗಳು ಬಂದಾಗ ಕೂಡಲೇ ಮಾಹಿತಿಯನ್ನು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು, ಇಲಾಖಾ ಕಾರ್ಯದರ್ಶಿಗಳಿಗೆ ರವಾನಿಸಲಾಗುವುದು. ಪತ್ರಿ ದಿನ ಬೆಳಗ್ಗೆ 10 ಗಂಟೆ ಹಾಗು ಸಂಜೆ 6 ಗಂಟೆಗೆ ಮಾಹಿತಿಯನ್ನು ಮುಖ್ಯಕಾರ್ಯದರ್ಶಿ ಹಾಗೂ ಇಲಾಖಾ ಕಾರ್ಯದರ್ಶಿಗಳಿಗೆ ಕಳುಹಿಸಿಕೊಡಲಾಗುತ್ತದೆ. ನಂತರ ಅವರು ಸಂಬಂಧಪಟ್ಟ ಜಿಲ್ಲಾಧಿಕಾರಿ ಜತೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬಹುದು. ಜನರ ಸಮಸ್ಯೆಗೆ ಪರಿಹಾರ ಸಿಕ್ಕಿದೆಯೇ ಎಂಬುದರ ಬಗ್ಗೆ ಎರಡು ದಿನಕ್ಕೊಮ್ಮೆ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯಕಾರ್ಯದರ್ಶಿ ಎಸ್‌.ವಿ.ರಂಗನಾಥ್‌, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಣಿವಣ್ಣನ್‌ ಇತರರು ಉಪಸ್ಥಿತರಿದ್ದರು.

Quotes

Once you start a working on something,
Dont be afraid of failure and
Dont abandon it.
People who work sincerely are the happiest.

— Chanakya

Newsletter

Get latest updates of my blog, news, media watch in your email inbox. subscribe to my newsletter