Shobha Karndlaje

Untitled-2

BJP Karnataka

ಜನರ ಸೇವೆಯೇ ಜನಾರ್ಧನನ ಸೇವೆ…

News From Just ಕನ್ನಡ

ಮಾಜಿ ಸಚಿವೆ ಶೋಭಾ ಕರಂದ್ಲಾಜೆಯ ನೂತನ ವೆಬ್ ಸೈಟ್ ಆರಂಭ

ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಲು ಈ ನೂತನ ಯೋಜನೆ

ಮೈಸೂರು, ಫೆ. 26-  ಜನರ ಸೇವೆ ಮಾಡಲು ಸಚಿವ ಸ್ಥಾನವೇ ಬೇಕೆಂದಿಲ್ಲ. ಒಬ್ಬ ಸಾಮಾನ್ಯ ಮನುಷ್ಯೆಯಾಗಿ, ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತೇನೆ.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವೆಯಾಗಿದ್ದ ಶೋಭಾ ಕರಂದ್ಲಾಜೆಯವರು ತಮ್ಮ ಮಂತ್ರಿಗಿರಿ ಕೈ ಜಾರಿ ಹೋದಾಗ ಪ್ರತಿಕ್ರಿಯೆ ನೀಡಿದ್ದು ಹೀಗೆ. ಅದರಂತೆ ಅವರು ನಡೆದುಕೊಂಡು ಬರುತ್ತಿದ್ದಾರೆ. ಅದಕ್ಕೆ ಮತ್ತೊಂದು ಉದಾಹರಣೆwww.shobhakarandlaje.com
ಅಧಿಕಾರ ಇಲ್ಲದಿದ್ದರೂ ಸರಕಾರ ಹಾಗೂ ಜನರ ನಡುವೆ ಕೊಂಡಿಯಾಗಬೇಕು ಎಂಬ ಉದ್ದೇಶದಿಂದ ಸ್ವಂತ ವೆಬ್ಸೈಟ್ ಸಿದ್ಧಪಡಿಸಿದ್ದಾರೆ.

ವೆಬ್ ಸೈಟ್  ಅನುಕೂಲಗಳು

ಇದರಲ್ಲಿ ಸರಕಾರದ ನಾನಾ ಯೋಜನೆ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ, ಆಸ್ಪತ್ರೆ, ವಿಶ್ವವಿದ್ಯಾಲಯ, ಶಾಲೆ, ಕಾಲೇಜು, ದೇವಸ್ಥಾನ, ಪ್ರವಾಸಿ ಸ್ಥಳಗಳ ಮಾಹಿತಿ, ಸಚಿವರ ದೂರವಾಣಿ ಸಂಖ್ಯೆ, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಹಾಗೂ ನಾನಾ ಇಲಾಖೆ ಕುರಿತ ವಿವರ, ಅಧಿಕಾರಿಗಳ ಸಂಪರ್ಕ ಸಂಖ್ಯೆ ಲಭ್ಯವಾಗಲಿದೆ. ಶೋಭಾ ಪ್ರತಿನಿಧಿಸುವ ಯಶವಂತಪುರ ವಿಧಾನಸಭೆ ಕ್ಷೇತ್ರದ ಅನುಕೂಲತೆ ಕುರಿತ ವಿಸ್ತೃತ ಮಾಹಿತಿ ದೊರಕಲಿದೆ. ಅಲ್ಲದೆ ಎಲ್ಪಿಜಿ ಸಿಲಿಂಡರ್, ಪಡಿತರ ಚೀಟಿ ಲಭ್ಯತೆಯ ವಿಚಾರವೂ ಇರುತ್ತದೆ. ಕನ್ನಡದ ಹಳೆಯ ಹಾಡುಗಳ ಲಿಂಕ್ ಕೂಡ ಇರಲಿದೆ.
ಪ್ರಚಲಿತ ವಿಷಯದ ಕುರಿತು ವೆಬ್ಸೈಟ್ನಲ್ಲಿರುವ ಬ್ಲಾಗ್ನಲ್ಲಿ ಕರಂದ್ಲಾಜೆ ಅವರು ಬರೆಯುತ್ತಾರೆ. ಸಾರ್ವಜನಿಕರ ಅಭಿಪ್ರಾಯಕ್ಕೆ ಸ್ವಾಗತವೂ ಇದೆ. ಚಾಟಿಂಗ್ ಮೂಲಕ ಅವರು ಜನರೊಂದಿಗೆ ವಾರಕ್ಕೊಮ್ಮೆ ಸಂವಾದ ನಡೆಸಲಿದ್ದಾರೆ.
ಇದೆಲ್ಲದರ ಜತೆ ವಿಶೇಷ ಸಾಧನೆ ಮಾಡಿದ ಯುವಕ, ಯುವತಿಯರು, ಮಹಿಳೆಯರನ್ನು ಪರಿಚಯಿಸುವ ಕಾರ್ಯವೂ ವೆಬ್ಸೈಟ್ನಿಂದ ಆಗಲಿದೆ.

ದಿಟ್ಟ ಮಹಿಳೆ

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವೆಯಾಗಿದ್ದಾಗ ಎರಡು ಬಾರಿ ನಾಡಹಬ್ಬ ಮೈಸೂರು ದಸರಾವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದರು. ಜತೆಗೆ ಹಲವು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದ ಖ್ಯಾತಿ ಇವರಿಗೆ ಸಲ್ಲುತ್ತದೆ. ಪಕ್ಷದಲ್ಲೇ ಕೆಲ ಹಿತಶತ್ರುಗಳ ಕುತಂತ್ರದಿಂದ ಮಂತ್ರಿ ಪಟ್ಟ ಕಳಚಬೇಕಾಯಿತು. ಆದರೂ ಅದಕ್ಕೆ ಬೇಸರಿಸಿಕೊಳ್ಳದೇ ಎಂದಿನಂತೆ ತಮ್ಮ ಕಾರ್ಯಚಟುವಟಿಕೆಯನ್ನು ಕೈಗೊಂಡರು. ಪಕ್ಷ ಸಂಘಟನೆಗಾಗಿ ಊರೂರು ತಿರುಗಾಡಿದರು, ದಲಿತ, ಹಿಂದುಳಿದ ಹಾಗೂ ಸಂತ್ರಸ್ತರ ಮನೆಯಲ್ಲಿ ವಾಸ್ತವ್ಯ ಹೂಡಿದರು. ಅವರ ಸಮಸ್ಯೆಯನ್ನು ನೀಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರು…. ಹೀಗೆ ಅವರ ಜನಪರ ಸೇವೆ ಮುಂದುವರಿಯುತ್ತದೆ.
ವೆಬ್ಸೈಟ್ ಅನ್ನು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಗುರುವಾರ ಚಾಲನೆ ನೀಡಿ ಮಾತನಾಡಿದರು. ಸುನಾಮಿ ಸಂತ್ರಸ್ತರ ಪರಿಹಾರ ಕಾರ್ಯದಲ್ಲಿ ಇವರ ಕಾರ್ಯಸ್ಪೂರ್ತಿ ಕಂಡು ಈಕೆ ಧೈರ್ಯವಂತೆ ಎಂಬುದು ಮನದಟ್ಟಾಯಿತು. ಸುನಾಮಿಯಲ್ಲಿ ಕೊಚ್ಚಿ ಹೋದವರಿಗೆ ಶೋಭಾ ನಿಜಾರ್ಥದಲ್ಲಿ ಅಂದು ಶವ ಸಂಸ್ಕಾರ ಮಾಡಿದ್ದರು, ಇಂಥ ಜಾಗಕ್ಕೆ ಹೋಗಲೂ ಗಂಡಸರೂ ಹೆದರುತ್ತಾರೆ ಅಂಥದರಲ್ಲಿ ಶೋಭಾ ಅಪ್ರತಿಮಾ ಶೌರ್ಯ ಮೆರೆದಿದ್ದಾರೆ ಎಂದು ಅವರ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು.

Quotes

My father was a statesman, I ama political woman. My father was a saint. I am not.

— Indira Gandhi

Newsletter

Get latest updates of my blog, news, media watch in your email inbox. subscribe to my newsletter