Shobha Karndlaje

Untitled-2

BJP Karnataka

ಜನತೆಗೆ ಮತ್ತೊಂದು ಶಾಕ್, ವಿದ್ಯುತ್ ದರ ಶೀಘ್ರ ಏರಿಕೆ?

ಬೆಂಗಳೂರು, ಜೂ.30: ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ, ಸಿಲಿಂಡರ್ ಮೇಲಿನ ಸೆಸ್ ಹಿಂದಕ್ಕೆ ಪಡೆಯಲು ಒಪ್ಪದ ಸರ್ಕಾರ, ಸಾರ್ವಜನಿಕರ ಮೇಲೆ ಇನ್ನೊಂದು ಭಾರ ಹೊರೆಸಲು ತಯಾರಾಗಿದೆ. ಈ ಬಾರಿ ವಿದ್ಯುತ್ ಬೆಲೆಯ ಸರದಿ. ಇಂಧನ ಸಚಿವೆ ಶೋಭಾ ಕರಂದ್ಲಾಜೆ ನೀಡಿರುವ ಹೇಳಿಕೆ ಗಮನಿಸಿದರೆ ವಿದ್ಯುತ್ ಬೆಲೆ ಸದ್ಯದಲ್ಲೇ ಏರಿಕೆಯಾಗಲಿದೆ.

ರಾಜ್ಯದ ಎಲ್ಲ ಎಸ್ಕಾಂಗಳು ಪ್ರತಿ ಯೂನಿಟ್ ವಿದ್ಯುತ್‌ಗೆ 88 ಪೈಸೆ ಹೆಚ್ಚಿಸುವಂತೆ ರಾಜ್ಯ ವಿದ್ಯುತ್ ನಿಯಂತ್ರಣಾ ಆಯೋಗಕ್ಕೆ ಮನವಿ ಸಲ್ಲಿಸಿವೆ. ರೈತರಿಗೆ ಉಚಿತ ವಿದ್ಯುತ್ ನೀಡುತ್ತಿರುವುದರಿಂದ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಲ್ಲಿದ್ದಲು ದರ ಹೆಚ್ಚಳವಾಗಿರುವುದರಿಂದ ವಿದ್ಯುತ್ ದರವನ್ನು ಹೆಚ್ಚಿಸುವುದು ಅನಿವಾರ್ಯ ಎನ್ನಲಾಗಿದೆ.
ಎನ್ಟಿಪಿಸಿ ಜೊತೆ ನೂರು ಮೆಗಾವ್ಯಾಟ್ ಒಪ್ಪಂದಕ್ಕೆ ಸಹಿ ಹಾಕಿ ಮಾತನಾಡುತ್ತ ಶೋಭಾ, ದರ ಏರಿಕೆ ನಿರ್ಧಾರ ಆಯೋಗದ ಕೈಯಲ್ಲಿದೆ. ರಾಜ್ಯದಲ್ಲಿ ಸೋಲಾರ್ ಉತ್ಪಾದನೆಗೆ ವಿಪುಲ ಅವಕಾಶವಿದೆ. ಎನ್ಟಿಪಿಸಿ ಗುಳೇದಗುಡ್ಡದಲ್ಲಿ ಸ್ಥಾಪಿಸಿದ ಪವನ ವಿದ್ಯುತ್ ಯೋಜನೆಯಿಂದ ಸರಕಾರ ಪ್ರತಿ ಯುನಿಟ್ ಗೆ 3.70 ನೀಡಿ ಖರೀದಿಸುತ್ತಿದೆ.
ರಾಜ್ಯ ಸರಕಾರದ ನಾಲ್ಕು ಮಹಾತ್ತ್ವಾಕಾಂಕ್ಷಿ ಯೋಜನೆಗಳಾದ ಯರಮರಸ್, ಯಡ್ಲಾಪುರ, ಛತ್ತೀಸ್‌ಗಡ ಮತ್ತು ಬಳ್ಳಾರಿ ಘಟಕಗಳಿಗೆ ಕೇಂದ್ರ ಸರ್ಕಾರ ಅನುಮತಿ ನೀಡಲು ಮೀನಮೇಷ ಎಣಿಸುತ್ತಿದೆ. ಇದರಿಂದ ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ ಎಂದರು.

http://thatskannada.oneindia.in/news/2011/06/30/energy-minister-shobha-hints-power-price-hike-aid0039.html

Quotes

Do we not all agree to callrapid thought and noble impulse by the name of inspiration?

— George Eliot

Newsletter

Get latest updates of my blog, news, media watch in your email inbox. subscribe to my newsletter