Shobha Karndlaje

Untitled-2

BJP Karnataka

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆಯಾಗಿ

ದಿನಾಂಕ 30.05.2008 ರಿಂದ 09.11.2009ರ ವರೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಖಾತೆಯ ಸಚಿವ ಸಂಪುಟ ದರ್ಜೆ ಸಚಿವೆ.

ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ

 • ಯೋಜನೆ ಅನುಷ್ಠಾನದಲ್ಲಿ ಇದ್ದ ಹಲವಾರು ತೊಡಕುಗಳನ್ನು ನಿವಾರಿಸಲು ಕ್ರಮ.
 • ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸೀಮಿತವಾಗಿದ್ದ ಯೋಜನೆ ವ್ಯಾಪ್ತಿಯನ್ನು ಕೃಷಿ, ತೋಟಗಾರಿಕೆ, ಅರಣ್ಯ, ನೀರಾವರಿ, ಜಲಾನಯನ ಮುಂತಾದ ಎಲ್ಲಾ ಇಲಾಖೆಗಳಿಗೂ ವಿಸ್ತರಿಸಲು ಕ್ರಮ.
 • ಕೇವಲ ಬಡತನದ ರೇಖೆಗಿಂತ ಕೆಳಗಿನ ಜನರಿಗೆ ಇದ್ದ ಅನುಕೂಲಗಳನ್ನು ಎಲ್ಲಾ ವರ್ಗದವರಿಗೆ ವಿಸ್ತರಿಸಲು ಕ್ರಮ.
 • ಯೋಜನೆ ಅನುಷ್ಠಾನಕ್ಕೆ ಅವಶ್ಯವಿದ್ದ ಸಿಬ್ಬಂದಿ ನೇಮಕಕ್ಕೆ ಕ್ರಮ (ಇಂಜಿನೀಯರ್, ಮೇಟ್ ಮುಂತಾದ ಸಿಬ್ಬಂದಿ).
 • ಯೋಜನೆ ಅನುಷ್ಠಾನ ಚುರುಕುಗೊಳಿಸಲು ನಿರಂತರ ಪರಿಶೀಲನೆ ಮಾರ್ಗದರ್ಶನ.

ಫಲಶೃತಿ :

 • ಈ ಎಲ್ಲಾ ಕ್ರಮಗಳಿಂದಾಗಿ 2008-2009ರಲ್ಲಿ ಇಡೀ ವರ್ಷಕ್ಕೆ 328 ಕೋಟಿ ಇದ್ದ ವೆಚ್ಚ 2009-2010ನೇ ಸಾಲಿನಲ್ಲಿ 9ನೇ ನವೆಂಬರ್-2009ರ ವೇಳೆಗೆ 900 ಕೋಟಿಗೆ ಏರಿಕೆ.
 • ಪ್ರತಿ ದಿನ ಸರಾಸರಿ 10 ಕೋಟಿ ರೂ.ಗಳ ವೆಚ್ಚ.
 • ಇದರಿಂದಾಗಿ ಕೇಂದ್ರ ಸರ್ಕಾರ 2009-2010ನೇ ಸಾಲಿಗೆ ನಿಗದಿಪಡಿಸಿದ್ದ 1,200 ಕೋಟಿ ಗುರಿ 2,300 ಕೋಟಿಗೆ ಏರಿಕೆ.
 • ವರ್ಷಾಂತ್ಯಕ್ಕೆ 2,300 ಕೋಟಿ ರೂ.ಗಳನ್ನು ಬಳಸಿಕೊಳ್ಳಲು ಕ್ರಮ.

ಪಿ.ಎಂ.ಜಿ.ಎಸ್.ವೈ ರಸ್ತೆ
(ರಾಜ್ಯದಲ್ಲಿ ಒಟ್ಟು 1,47,212 ಕಿ.ಮಿ. ಉದ್ದದ ಗ್ರಾಮೀಣ ರಸ್ತೆ ಇರುತ್ತದೆ. ಇದರಲ್ಲಿ 39,394 ಕಿ.ಮಿ. ಮಾತ್ರ ಡಾಂಬರೀಕರಣ ಆಗಿರುತ್ತದೆ. 24,730 ಕಿ.ಮಿ.ದಲ್ಲಿ ರಸ್ತೆ ಹಾಗೂ 83,088 ಕಿ.ಮಿ. ಕಚ್ಚಾ ರಸ್ತೆ ಇರುತ್ತದೆ.)

 • ಈ ಯೋಜನೆಯಡಿ 2008-2009ರಲ್ಲಿ ಕೇಂದ್ರ ಸರ್ಕಾರವು ನಿಗದಿಪಡಿಸಿದ್ದ ಭೌತಿಕ ಗುರಿ 1,800 ಕಿ.ಮಿ. ಎದುರಾಗಿ 2090 ಕಿ.ಮಿ. ಅಭಿವೃದ್ಧಿಪಡಿಸಲಾಯಿತು. ಈ ಸಾಲಿಗೆ ನಿಗದಿಪಡಿಸಿದ್ದ ಆರ್ಥಿಕ ಗುರಿ 450 ಕೋಟಿಗೆ ಎದುರಾಗಿ ೬೫೦650 ಕೋಟಿ ಆರ್ಥಿಕ ಸಾಧನೆ ಮಾಡಲಾಯಿತು.
 • ಈ ಸಾಧನೆಯು ಇಡೀ ದೇಶದಲ್ಲಿ ಕರ್ನಾಟಕವನ್ನು ಎರಡನೇ ಸ್ಥಾನಕ್ಕೆ ತರಲು ನೆರವಾಯಿತು.
 • ಇದರಿಂದಾಗಿ 2009-2010ನೇ ಸಾಲಿಗೆ ಕೇಂದ್ರ ಸರ್ಕಾರವು 3,100 ಕಿ.ಮಿ. ಭೌತಿಕ ಗುರಿ ಹಾಗೂ 1,100 ಕೋಟಿ ಆರ್ಥಿಕ ಗುರಿಯನ್ನು ನೀಡಲು ಸಾಧ್ಯವಾಯಿತು.
 • ಲೆಕ್ಕ ಶೀರ್ಷಿಕೆ 5054 ಹಾಗೂ 3054ಗಳಡಿ ರಸ್ತೆ ಅಭಿವೃದ್ಧಿ ಮಾಡುವುದರ ಜೊತೆಗೆ ಪ್ರತಿ ವರ್ಷ 10,000 ಕಿ.ಮಿ. ರಸ್ತೆಯನ್ನು ಆನ್ಯೂಟಿ ಆಧಾರದ ಮೇಲೆ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ.

ಸಂಪೂರ್ಣ ನೈರ್ಮಲ್ಯ ಯೋಜನೆ

 • ರಾಜ್ಯದಲ್ಲಿ 56 ಲಕ್ಷ ಕುಟುಂಬಗಳಿದ್ದು ಇದುವರೆಗೆ 21.5 ಲಕ್ಷ ಕುಟುಂಬಗಳಲ್ಲಿ ಮಾತ್ರ ಶೌಚಾಲಯ ಇರುತ್ತದೆ. ಇದು ಪ್ರತಿಶತ 39ರಷ್ಟಾಗಿರುತ್ತದೆ.
 • ಕೇಂದ್ರ ಸರ್ಕಾರ 2005ರಿಂದ ಸಂಪೂರ್ಣ ಸ್ವಚ್ಚತಾ ಆಂದೋಲನ ಜಾರಿಗೆ ತಂದಿದ್ದು 5 ವರ್ಷಗಳಲ್ಲಿ ಸಂಪೂರ್ಣ ಸ್ವಚ್ಛತೆ ಸಾಧಿಸುವುದು ಉದ್ದೇಶವಾಗಿದೆ.
 • ಈ ದಿಸೆಯಲ್ಲಿ ಸಂಪೂರ್ಣ ಸ್ವಚ್ಛತೆ ಸಾಧಿಸಲು ನಿರಂತರ ಪ್ರಯತ್ನ ಮಾಡಲಾಗಿದೆ. 1,200ರೂ.ಗಳಿದ್ದ ಪ್ರೋತ್ಸಾಹಧನವನ್ನು 3,000ರೂ.ಗಳಿಗೆ ಹೆಚ್ಚಿಸಲಾಗಿದೆ.
 • ಎನ್.ಆರ್.ಇ.ಜಿ.ಎ. ಯೋಜನೆಯಡಿ ಶೌಚಾಲಯ ನಿರ್ಮಾಣಕ್ಕೆ ಕೂಲಿ ಬಾಬ್ತು ಹಣ ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
 • ವೈಯಕ್ತಿಕ ಶೌಚಾಲಯ ಅಲ್ಲದೆ ಶಾಲೆ, ಅಂಗನವಾಡಿ ಹಾಗೂ ಸಾಮೂಹಿಕ ಶೌಚಾಲಯಗಳ ನಿರ್ಮಾಣಕ್ಕೂ ಆದ್ಯತೆ ನೀಡಲಾಗಿದೆ.
 • 2006-2007ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ನಿರ್ಮಲ ಗ್ರಾಮ ಪುರಸ್ಕಾರ ಪ್ರಶಸ್ತಿ ಘೋಷಿಸಿದ್ದು 2007-2008ರಲ್ಲಿ 479 ಗ್ರಾಮ ಪಂಚಾಯಿತಿಗಳು, 3 ತಾಲ್ಲೂಕು ಪಂಚಾಯತಿಗಳು ಪುರಸ್ಕಾರ ಪಡೆದಿದ್ದು 2008-2009ನೇ ಸಾಲಿನಲ್ಲಿ 514 ಗ್ರಾಮ ಪಂಚಾಯಿತಿಗಳು, 6 ತಾಲ್ಲೂಕು ಪಂಚಾಯತಿಗಳು ಪುರಸ್ಕಾರ ಪಡೆದಿವೆ.
 • ಕೇಂದ್ರ ಸರ್ಕಾರ ರೂಪಿಸಿರುವಂತೆ 2009-2010ನೇ ಸಾಲಿನಲ್ಲಿ ರಾಜ್ಯ ಸರ್ಕಾರವು ನೈರ್ಮಲ್ಯ ಪ್ರಶಸ್ತಿ ಸ್ಥಾಪಿಸಲಾಯಿತು. ಈ ಪ್ರಶಸ್ತಿ ಉತ್ತಮ ಸಾಧನೆ ಮಾಡಿದ ಗ್ರಾಮಪಂಚಾಯತಿಗಳಿಗೆ ಅಲ್ಲದೆ ಗ್ರಾಮಗಳಿಗೂ ನೀಡುವುದಾಗಿದೆ. ಅಲ್ಲದೆ ನೈರ್ಮಲ್ಯ ಮುಂದುವರಿಕೆ ಅಥವಾ ನಿರಂತರತೆ ಕಾಯ್ದುಕೊಳ್ಳುವುದಕ್ಕೂ ಸೇರಿರುತ್ತದೆ.

ಕುಡಿಯುವ ನೀರು
ರಾಜ್ಯದಲ್ಲಿ 59,630 ಜನ ವಸತಿಗಳಿವೆ, ಇದುವರೆಗೆ 20,586 ನಲ್ಲಿ ನೀರು ಸರಬರಾಜು, 2.06 ಲಕ್ಷ ಕೈಪಂಪು ಕೊಳವೆಬಾವಿಗಳ ಮೂಲಕ ಜನವಸತಿಗಳಿಗೆ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ.

 • ಪ್ರಸ್ತುತ ಈ ಯೋಜನೆಗಳಿಂದ 39,125 ಗ್ರಾಮಗಳಿಗೆ ದಿನವಹಿ ಪ್ರತಿ ವ್ಯಕ್ತಿಗೆ 40-45 ಲೀಟರ್ ನೀರು ಪೂರೈಸಲಾಗುತ್ತಿದೆ. ಉಳಿದ 20,505 ಜನವಸತಿಗಳಿಗೆ 20-40 ಎಲ್.ಪಿ.ಸಿ.ಡಿ ನೀರು ಪೂರೈಸಲಾಗುತ್ತಿದೆ. ಈ ಗ್ರಾಮಗಳ ಪೂರೈಕೆಯನ್ನು 40-55ಕ್ಕೆ ಏರಿಸುವ ಅವಶ್ಯವಿದೆ.
 • ಇವುಗಳ ಪೈಕಿ 21,000 ಗ್ರಾಮಗಳಲ್ಲಿ ಗುಣಮಟ್ಟದ ಸಮಸ್ಯೆ ಇರುವ ನೀರು ಪೂರೈಕೆ ಆಗುತ್ತಿದೆ.
 • ಗುಣಮಟ್ಟ ಸಮಸ್ಯೆ ಇರುವ ಗ್ರಾಮಗಳಲ್ಲಿ ಗುಣಮಟ್ಟ ಸುಧಾರಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ.
 • ಹನ್ನೊಂದು ಜಿಲ್ಲೆಗಳಲ್ಲಿ ಸಬ್‌ಮಿಷನ್ ಯೋಜನೆಯಡಿ ಕೈಗೊಂಡಿದ್ದ ವಿಶ್ವಬ್ಯಾಂಕ್ ನೆರವಿನ ಯೋಜನೆ ಮುಂದುವರೆಸಲು 1,500 ಕೋಟಿ ರೂ.ಗಳ ಹೆಚ್ಚುವರಿ ಅನುದಾನವನ್ನು ಜುಲೈ ಮೊದಲವಾರದಲ್ಲಿ ವಿಶ್ವಬ್ಯಾಂಕ್‌ಗೆ ಭೇಟಿ ನೀಡಿ ಮಂಜೂರಾತಿ ಪಡೆಯಲು ಕ್ರ್ರಮವಹಿಸಲಾಗಿದೆ.
 • ಉಳಿದಂತೆ ಎಲ್ಲಾ ಸಮಸ್ಯಾತ್ಮಕ ಗ್ರಾಮಗಳಲ್ಲಿ ಸುಮಾರು 109 ಯೋಜನೆಗಳನ್ನು ಕೈಗೊಳ್ಳಲು ಸಮೀಕ್ಷೆ ಮಾಡಿದ್ದು, ಸುಮಾರು 350 ಕೋಟಿ ರೂ.ಗಳ ಅವಶ್ಯವಿರುತ್ತದೆ.
 • ಇವುಗಳಲ್ಲಿ ತುರ್ತು 109 ಕೋಟಿ ವೆಚ್ಚದಲ್ಲಿ 56 ಯೋಜನೆಗಳಿಗೆ ಈ ಸಾಲಿನಲ್ಲಿ ಕೈಗೊಳ್ಳಲು ಅನುಮೋದನೆ ನೀಡಲಾಗಿದೆ.

ಸುವರ್ಣ ಗ್ರಾಮ
ಆಯ್ದ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗಾಗಿ 2006-2007ನೇ ಸಾಲಿನಲ್ಲಿ ಸುವರ್ಣ ಗ್ರಾಮ ಯೋಜನೆ ರೂಪಿಸಲಾಯಿತು.

 • ಮೊದಲನೇ ಹಂತದಲ್ಲಿ 1,204 ಗ್ರಾಮಗಳನ್ನು ಆಯ್ಕೆ ಮಾಡಿ 1,000ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಅನುಷ್ಠಾನ ಗೊಳಿಸಲಾಗಿದೆ.
 • ಎರಡನೇ ಹಂತದಲ್ಲಿ 222 ಗ್ರಾಮಗಳನ್ನು ಗುಲ್ಬರ್ಗಾ ಕಂದಾಯ ವಿಭಾಗದಲ್ಲಿ ಆಯ್ಕೆ ಮಾಡಿ 2,208ಕೋಟಿ ರೂ.ಗಳ ಯೋಜನೆ ರೂಪಿಸಲಾಗಿದೆ.
 • ಮೂರನೇ ಹಂತದಲ್ಲಿ 1,545 ಗ್ರಾಮಗಳನ್ನು ಆಯ್ಕೆ ಮಾಡಿ 1,000ಕೋಟಿ ರೂ.ಗಳ ಅಂದಾಜು ತಯಾರಿಸಲಾಗುತ್ತಿದೆ.
 • ನಾಲ್ಕನೇ ಹಂತದಲ್ಲಿ ಗುಲ್ಬರ್ಗಾ ಕಂದಾಯ ವಿಭಾಗದಲ್ಲಿ 200ಗ್ರಾಮಗಳನ್ನು ಆಯ್ಕೆ ಮಾಡಲು ಪ್ರಕ್ರಿಯೆ ಪ್ರಾರಂಬಿಸಲಾಗಿದೆ.

ಆಡಳಿತ ವಿಷಯಗಳು
ಅಭಿವೃದ್ಧಿ ಅಧಿಕಾರಿಗಳ ನೇಮಕ

 • ಪಂಚಾಯತ್ ರಾಜ್ ಬಲವರ್ದನೆಗೆ ಅಗತ್ಯ ಆಡಳಿತ ವ್ಯವಸ್ಥೆ ಕಲ್ಪಿಸಲು ಎಲ್ಲಾ 5,628 ಗ್ರಾಮಪಂಚಾಯತಿಗಳಿಗೆ ಉಪ ತಹಸೀಲ್ದಾರ್ ಶ್ರೇಣಿಯ ಅಭಿವೃದ್ಧಿ ಅಧಿಕಾರಿಗಳ ನೇಮಕಕ್ಕೆ ಕ್ರಮ.
 • ಪ್ರಸ್ತುತ ವರ್ಷ 2,500 ಅಭಿವೃದ್ಧಿ ಅಧಿಕಾರಿಗಳ ನೇಮಕ ಪ್ರಕ್ರಿಯೆ ಮುಕ್ತಾಯ ಹಂತದಲ್ಲಿದೆ.
 • 3-4 ಗ್ರಾಮಪಂಚಾಯತಿಗಳಿಗೆ ಒಬ್ಬರಂತೆ ಲೆಕ್ಕ ಸಹಾಯಕರ ನೇಮಕಕ್ಕೆ ಕ್ರಮ.
 • ಖಾಲಿ ಇರುವ ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳ ನೇರ ನೇಮಕಕ್ಕೆ ಕ್ರಮ.
 • ಇಲಾಖೆಯಲ್ಲಿ ಬಹು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ವೃಂದ ಮತ್ತು ನೇಮಕಾತಿ ನಿಯಮಗಳ (ಅ & ಖ) ತಯಾರಿಕೆಗೆ ಕ್ರಮ.
 • ಗ್ರಾಮಪಂಚಾಯತ್ ಕಾರ್ಯದರ್ಶಿಯಿಂದ ಸಚಿವಾಲಯದ ಅಧಿಕಾರಿಗಳವರೆಗೆ ಎಲ್ಲರಿಗೂ ಮೊಬೈಲ್ ದೂರವಾಣಿ ಸಂಪರ್ಕ ವ್ಯವಸ್ಥೆ.
 • ಕಾಮಗಾರಿಗಳ ಅನುಷ್ಠಾನದಲ್ಲಿ ಪ್ಯಾಕೇಜ್ ಟೆಂಡರ್ ಪದ್ದತಿ ಕಟ್ಟುನಿಟ್ಟಿನ ಅನುಷ್ಠಾನ.

Quotes

Do we not all agree to callrapid thought and noble impulse by the name of inspiration?

— George Eliot

Newsletter

Get latest updates of my blog, news, media watch in your email inbox. subscribe to my newsletter